Album: Black And White
Music: All Ok
Lyrics: All Ok
Label: ALL OK Records
Released: 2021-09-09
Duration: 04:02
Downloads: 416218
ಒಪ್ಪತ್ತಿನ ಊಟವು ಸಿಕ್ಕರೂ ಹಂಚಿ ತಿನ್ನುವುದು ಸಿರಿತನ (ಸಿರಿತನ, ಸಿರಿತನ) ತಲೆಮಾರಿನ
ಆಸ್ತಿಯೇ ಇದ್ದರೂ ಕದ್ದು ತಿನ್ನುವುದು ಬಡತನ ಅರಸು ಒಳ್ಳೆ ಗುಣಗಳು
ಬೆಳೆಯಲಿ ಪೈರು ಬಿಟ್ಟಂಗೆ ಅಳಿಸು ಕೆಟ್ಟ ಯೋಚನೆ ಕಳೆಯಲಿ ಕಳೆ ಕಿತ್ತಂಗೆ
ಕ್ಷಮಿಸು ಕಟುಕನ ಕಣ್ಣಿನಲ್ಲಿ ನೀರು ಕಂಡಂಗೆ ಅರಸು ಮನಸೇ ಕ್ಷಮಿಸು ಸ್ಮರಿಸು.
ಏನು ಇಲ್ಲದಾಗ ಊಟ ಕೊಟ್ಟವರ ತ್ಯಜಿಸು ನಾನು ನಂದು ಎಂಬ ಅಹಂಕಾರವ
ಜಪಿಸು ಎಲ್ಲ ನೋಡಿಕೊಳ್ಳೋ ಪರದೈವವ ಸ್ಮರಿಸು ಮನಸೇ ಜಪಿಸು ಸಾಕು
ಎಂದೋನು ಸಾಹುಕಾರ ಬೇಕು ಎಂದವನು ಬಡವ ಈ ಸಾಕು ಬೇಕುಗಳ ಮದ್ಯೆ
ನಿಂತು ದಿನ ಜೀವನ ನಡೆಸೋನು ಮನುಜ ಇಲ್ಲಿ ಸರಳತೆ ಅನ್ನೋದ್ ಅಂಧಕಾರ
ಆಸೆಯ ಹೀರೋ ಕಣಜ ಇಲ್ಲಿ ತಗ್ಗಿ ಬಗ್ಗಿದರೆ ಏನು ಸಿಗುವುದಿಲ್ಲ ಮಾಡಬೇಕು
ಎಲ್ಲ ಕಬ್ಜ ಜಗದಲ್ಲಿ ಬೆಳೆದಿರೋ ಮರವನ್ನು ಬಗ್ಗಿಸಲು ಆಗೋದಿಲ್ಲ ಬಗ್ಗಿಸಲು
ಸಾಧ್ಯ ಬರಿ ಗಿಡವ ಹಾಗೆ ಇಲ್ಲಿ ಮುಂದೆ ನುಗ್ಗಿ ಪಡಿಬೇಕು ಬೇಕಾದನ್ನ
ನಿನಗಾಗಿ ಎಲ್ಲ ಕಡೆ ತೋರಿಸಿ ನಿನ್ನಯ ಬಲವ ಸೋತರೆ ದ್ವೇಷ ಬೆನ್ನಲ್ಲಿ
ಶಾಪ ಹಾಕೊಂಡ್ ಸುಳ್ಳನಾಡುವ ಸ್ನೇಹದ ಮದ್ಯ ನಿಜವನ್ನಾಡುವ ಕೋಪ ಇಟ್ಕೊಂಡ್ ಬಾಳ್ತೀನಿ
ನಾನು ಏಕಾಂಗಿ ತರ ದಾಸನ ಮಾಡಿಕೊ ಎನ್ನ ದಾಸನ ಮಾಡಿಕೊ
ಎನ್ನ, ಸ್ವಾಮಿ ಸಾಸಿರ ನಾಮದ ವೆಂಕಟ ರಮಣ ದಾಸನ ಮಾಡಿಕೊ ಎನ್ನ
ಸಾಸಸ ಸರಿಸನಿ ಸಸಸಾರಿ ಗಗರಿಸ ಪಾಪಪ ಪದಪಮ ಪಪಪದ ನಿನಿದಪ
ಮಪದನಿ ಪದನಿ ಸನಿಗರಿಸ ದುರುಭುದ್ದಿಗಳನೆಲ್ಲ ಬಿಡಿಸೋ ದುರುಭುದ್ದಿಗಳನೆಲ್ಲ ಬಿಡಿಸೋ ನಿನ್ನ
ಕರುಣಾ ಕವಚವೆನ್ನ ಹರಣಕೆ ತೊಡಿಸೋ ಚರಣ ಸೇವೆ ಎನಗೆ ಕೊಡಿಸೋ
ನನ್ನ ಕೈಯೇ ಇಲ್ಲಿ ಚಿಲುಮೆ ಹೊಟ್ಟೆಗೆ ಬೇಕು ಹೆಂಡ ಕಾಡಿ ಬಡಿ
ತುಳಿ ದುಡಿ ಕೆಟ್ಟ ಕೆಲಸ ಮಾಡಿಕೊಂಡು ಬದುಕುವೆ ನಾನು ಪ್ರಚಂಡ ಜೀವನ
ಒಂದು ಕಳ್ಳರ ಸಂತೆ ಬದುಕು ಕಟ್ಬೇಕು ದಂಡ ಖುಷಿ ಆಗಿರಬೇಕು ಅಂದ್ರೆ
ಮಾಡಿಕೊ ಮೊದಲು ನಿನ್ನ ಭಾವನೆಗಳ ಮೊಂಡ ಇಲ್ಲಿ ಬೆವರಿನ ದುಡಿಮೆಯು ಕೂಡಿ
ಇಟ್ಟ ವರೆಗೆನೆ ತಲೆ ಹೊಡೆದಿರೋ ಕಾಸು ಕಂಡವರ ಪಾಲಿಗೇನೆ ಎಲುಬು ಇಲ್ಲದ
ನಾಲಿಗೇಲಿ ತುಂಬಿಸಿ ಕೊಳ್ಳೋದು ಜೋಳಿಗೇನೆ ಹೆಣ ಕೂಡ ಸುಡೋದಿಲ್ಲ ಜೇಬಲ್ ಕಾಸು
ಇಲ್ಲದೇನೆ ದಿನವಿಡೀ ಚಡಪಡಿಸುವ ಯುವ ಪ್ರತಿಬೆಗೆ ಗಡ ಬಡ ಸುಡೋ ಸರ
ಪಣಿಯ ಸಲಾಕೆ ಮೆರಿತಿನಿ ನೋಡುತಿರು ತುಳುಕೊಂಡು ಎಲ್ಲರನ್ನು ಇಲ್ಲಿ ಕಲಿಯುಗದಲಿ ಬೆಲೆ
ಆದರೇನೆ ಪಾಪಿ ಯಾರು ಕಂಡವರು ಕಾಲವ ಇಲ್ಲಿ ಯಾರು ಬಲ್ಲವರು
ಎಲ್ಲವ ಕಾಲ ಉರುಳಿದಂತೆ ಮಾಸಿ ಹೋಗುವನು ಮೂಳೆ ಮಾಂಸದ ಮಾನವ ತಿಳಿದುಕೋ
ನಿನ್ನಯ ವಾಸ್ತವ ತಲೆ ತಗ್ಗಿಸಿ ಪ್ರಾರ್ಥಿಸು ದೈವವ ಇಲ್ಲಿ ಮೆರೆಯ ಹೊರಟವರ
ವಿಳಾಸ ಸಿಕ್ಕಿದ್ ಘೋರಿ ಕಲ್ಲುಗಳ ಕೆತ್ತನೆಲಿ ರಮಣಾ ಸ್ವಾಮಿ ರಮಣಾ
ಸ್ವಾಮಿ