Album: Manava Dialogue Santrigal Yalan Romba
Singer: Various Artists
Label: Universal Music India .
Released: 1985-01-01
Duration: 05:04
Downloads: 76762
ನಿನ್ನ ಆಥಿತ್ಯದಿಂದ ಸಂತರಿಗೆಲ್ಲಾ ತುಂಬಾ ತೃಪ್ತಿಯಾಗಿದೆ ರುಚಿಯಾದ ಊಟ ಹಾಕಿ ನಾಲಿಗೆಯನ್ನ
ತೃಪ್ತಿಪಡಿಸಿದ್ದೀಯಾ ಹಾಗೆಯೇ, ಆ ಭಗವಂತನ ನಾಮಾಮೃತದಿಂದ ಈ ಕಿವಿಯನ್ನು ತೃಪ್ತಿ ಪಡಿಸು
ತಮ್ಮಂಥ ಮಹಾನುಭಾವರು ಮುಂದೆ ನಾನು ಹೇಳು, ಹೇಳು ತಿಳಿದೇಯಿರೋದನ್ನ ತಿಳಿದ್ಕೊಳ್ಳೋಣ ತಿಳ್ಕೊಂಡಿರೋದನ್ನ
ತಿಳ್ಸೋಣ ಚಿತ್ತ ಪರ ತತ್ವವನು ಬಲ್ಲ ಪಂಡಿತನು ನಾನಲ್ಲ ಹರಿನಾಮವೊಂದುಳಿದು
ನನಗೇನು ತಿಳಿದಿಲ್ಲ ನನಗೇನು ತಿಳಿದಿಲ್ಲ ಮಾನವಾ, ದೇಹವು ಮೂಳೆ ಮಾಂಸದ
ತಡಿಕೆ ಮಾನವಾ, ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ಮಾನವಾ, ಮೂಳೆ ಮಾಂಸದ ತಡಿಕೆ
ನವ ಮಾಸಗಳು ಹೊಲಸಲಿ ಕಳೆದು ನವ ರಂದ್ರಗಳಾ ತಳೆದು ಬೆಳೆದು ಬಂದಿದೆ
ಭುವಿಗೆ ಈ ನರ ಬೊಂಬೆ ನಂಬಲು ಏನಿದೆ ಸೌಭಾಗ್ಯವೆಂಬೆ ಮಾನವಾ,
ಮೂಳೆ ಮಾಂಸದ ತಡಿಕೆ ದೇಹವು ಮೂಳೆ ಮಾಂಸದ ತಡಿಕೆ ಉಸಿರಾಡುವ
ತನಕ ನಾನು ನನದೆಂಬ ಮಮಕಾರ ನಿಂತ ಮರುಘಳಿಗೆ ಮಸಣದೇ ಸಂಸ್ಕಾರ ಮಣ್ಣಲೀ
ಬೆರೆತೂ ಮೆಲ್ಲಗೆ ಕೊಳೆತು ಮುಗಿಯುವಾ ದೇಹಕೇ, ವ್ಯಾಮೋಹವೇಕೇ ಮಾನವಾ ಮೂಳೆ
ಮಾಂಸದ ತಡಿಕೆ ದೇಹವು ಮೂಳೆ ಮಾಂಸದ ತಡಿಕೆ ಬರುವಾಗ ಬೆತ್ತಲೆ,
ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ, ಬರೀ ಕತ್ತಲೆ ಭಕ್ತಿಯ ಬೆಳಕು
ಬಾಳಿಗೆ ಬೇಕು ಮುಕ್ತಿಗೆ ವಿಠಲನ ಕೊಂಡಾಡಬೇಕು ಮಾನವಾ ಮೂಳೆ ಮಾಂಸದ
ತಡಿಕೆ ದೇಹವು ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ಮಾನವಾ ಮೂಳೆ ಮಾಂಸದ ತಡಿಕೆ
ವಿಠಲಾ ವಿಠಲಾ ಪಾಂಡುರಂಗ ವಿಠಲಾ (ವಿಠಲಾ ವಿಠಲಾ ಪಾಂಡುರಂಗ ವಿಠಲಾ) ವಿಠಲಾ
ವಿಠಲಾ ಪಾಂಡುರಂಗ ವಿಠಲಾ (ವಿಠಲಾ ವಿಠಲಾ ಪಾಂಡುರಂಗ ವಿಠಲಾ) ವಿಠಲಾ ವಿಠಲಾ
ಪಾಂಡುರಂಗ ವಿಠಲಾ ಪಾಂಡುರಂಗ ವಿಠಲಾ, ಪಾಂಡುರಂಗ ವಿಠಲಾ