Album: Mareyalaguthilla
Music: Vishal Thimmaiah, Sadwini Koppa, Akshay S Rishab
Lyrics: Rakeshsubramani, Mani B
Label: A2 Music
Released: 2021-04-21
Duration: 04:28
Downloads: 288315
ಈ ನನ್ನ ಕನಸು ನನಸಾಗಿರಲು ನೀ ಕಾರಣ ತುಟಿ ಅಂಚಲಿ ನಗೆಯನ್ನು
ಬೀರಲು ನೀ ಕಾರಣ ಮರೆಯಾಗಲು ಪ್ರೀತಿಯ ಬೆಸುಗೆ ನೀ ಕಾರಣ ಆ
ನನ್ನ ಕನಸು ಕಣ್ಮರೆಯಾಗಲು ನೀ ಕಾರಣ ಮನಸು ಮೌನವ ಮುರಿಯುತಿದೆ ನಿನ್ನ
ನೋಡಲು ಬಯಸುತಿದೆ ಹೃದಯ ಬಡಿತವ ನಿಲ್ಲಿಸದೆ ಕಣ್ಣಾರೆಪ್ಪೆಯ ಮುಚ್ಚಿಸದೆ ನಿನ್ನಿಂದ
ಬದುಕಿದೆ ಈ ನನ್ನ ಜೀವ ನೀ ತಂದ ನಗುವಲ್ಲೆ ಮರೆತಿದೆ ನೋವ
ನೀ ದೂರ ಹೋದರೆ ಅಳುವುದು ಮನಸು ನೀ ಇಲ್ಲವಾದರೆ ನಿನ್ನನ್ನು
ಮರೆಯಲಾಗುತ್ತಿಲ್ಲ ನೋವನು ತಡೆಯಲಾಗುತ್ತಿಲ್ಲ ಮೌನ ಮುರಿಯುತ್ತಿಲ್ಲ ನೀನಿಲ್ಲದೆ ಬದುಕಲಾಗುತ್ತಿಲ್ಲ ಕಣ್ಣ ಮುಚ್ಚಿ
ಕುಳಿತೆ ನಾನು ಎದುರಲಿ ಬಂದು ನಿಂತೆ ನೀನು ಪ್ರೀತಿ ನಂಬಿ ಬಂದೆ
ನೀನು ಮೋಸ ಮಾಡಿ ಹೋದೆ ಜೀವ ಹೂ... ವಾಗಿದೆ ಜೀವ
ಹೂ... ವಾಗಿದೆ ನಾನು ನೋಡೋದಕ್ಕೆ ಮಾತ್ರ ಒರಟ ಕಣೇ ನನ್ನ ಮನಸ್ಸು
ತುಂಬಾನೇ ಮೃದುವು ಕಣೇ ನನ್ನ ಪ್ರೀತಿಯ ಬೊಂಬೆಯು ನೀನೇ ಕಣೇ ನೀನಿಲ್ಲದ
ಪ್ರೀತಿಯು ಬೇಡ ಕಣೇ ಓ ನನ್ನ ಪ್ರೇಯಸಿ, ನನ ಕೊಲ್ಲೋ
ರಾಕ್ಷಸಿ ನಗುವಲ್ಲೇ ಕಾಡಿಕೊಳ್ಳೋ ನೀನನ್ನ ಮೋಹಿನಿ ನೀ ನನ್ನ ಕಣ್ಮಣಿ ನನ್ನ
ಕನಸಿನ ರಾಣಿ ನೀ ನಿನ್ನಿಂದ ಹುಟ್ಟುತ್ತಿದೆ ಕಣ್ಣಿನಲ್ಲಿ ಇಬ್ಬನಿ ಕನಸಲೂ ನನಸಲೂ
ನನ್ನ ಜೊತೆಗೆ ಇರುವೇ ನೀ ನಗುವಲೂ ಅಳುವಲೂ ನಿನ್ನ ಜೊತೆಗೆ ಇರುವೆ
ನಾ ನಿನ್ನ ಉಸಿರು ನಾನೇ ನಾನೇ ನನ್ನ ಉಸಿರು ನೀನೇ
ನಿನ್ನನ್ನು ಮರೆಯಲಾಗುತ್ತಿಲ್ಲ ನೋವನು ತಡೆಯಲಾಗುತ್ತಿಲ್ಲ ಮೌನ ಮುರಿಯುತ್ತಿಲ್ಲ ನೀನಿಲ್ಲದೆ ಬದುಕಲಾಗುತ್ತಿಲ್ಲ ಕಣ್ಣ
ಮುಚ್ಚಿ ಕುಳಿತೆ ನಾನು ಎದುರಲ್ಲಿ ಬಂದು ನಿಂತೆ ನೀನು ಪ್ರೀತಿ ನಂಬಿ
ಬಂದೆ ನೀನು ಮೋಸ ಮಾಡಿ ಹೋದೆ ಜೀವವೇ, ನೀ ನನ್ನ
ಮರೆತರೇ ಇರುವುದೇ ಈ ನನ್ನ ಜೀವನ, ನಿನ್ನಿಂದ ದೂರವೇ ಹೋಗದೆ ಈ
ಜೀವ ಸಂಗಾತಿಯಾಗುವೆ ನಿನ್ನ ಜೀವನ ಕಥೆಗೆ ಜೊತೆಯಾಗಿಯೇ ನಿನ್ನ ಭಾವನೆಗಳಿಗೆ ನಾ
ನಿನಗಾಗಿಯೇ ನೆರಳಾಗುವೆ ನಿನಗಾಗಿಯೇ ನಗುವಾಗುವೆ ನಾನು ಕಣ್ಣಿನಲ್ಲಿ ಕೊಲ್ಲುವೆ ನನ್
ಕನಸಿನಲ್ಲಿ ಕಾಡುವೆ ಆ ನಿನ್ನ ಮಾತು ಸಾಕು ಬೇರೆ ಏನು ಬೇಡ
ನಾ ಅವಳಿಗಾಗಿ ಕಾದಿದ್ದೆ Parkನಲ್ಲಿ Mallನಲ್ಲಿ Roadನಲ್ಲಿ ಒಬ್ಬನೇ ಅಂದು ಇನ್ನೇನು
ಬೇಕು ಮಧ್ಯರಾತ್ರಿ ಬಂದಾಯ್ತು ಕನಸುಗಳು ಶುರುವಾಯ್ತು ದೇವತೆ ನೀ ನನ್ನ ಕನಸಿನಲ್ಲಿ
ಎಷ್ಟು ಚೆನ್ನ ಇನ್ನೂ ನೂರು ಜನ್ಮ ಒಂದಾಗಿ ಸೇರಿ ಬಾಳೋ ಆಸೆ
ಎಂದೂ ಕಮ್ಮಿ ಆಗೋದಿಲ್ಲ ನಿನ್ನ ಮೇಲೆ ಇಷ್ಟ ಅಂತ ಹೇಳಕ್ಬಂದೆ ಕಷ್ಟ
ಕೊಟ್ಟು ತಳ್ಳಿ ಹೋದೆ ಇಷ್ಟ ಆದ್ರೆ Take Care ಕಷ್ಟ ಕೊಟ್ರೆ
Don′t Care ಹೆಜ್ಜೆ ಮೇಲ್ ಹೆಜ್ಜೆ ಇಟ್ಟು ನನ್ನ ಪ್ರೀತಿ ಜೀವ
ಕೊಟ್ಟು ಪೊಗರು ಹುಡುಗಿ ನನ್ನ ಬಿಟ್ಟು ಹೋಗಬೇಡ ನೋವ ಕೊಟ್ಟು ಜೊತೆಗೆ
ಬಾರೆ ನಂಬಿಕೆ ಇಟ್ಟು ನೋಡ್ಕೋತೀನಿ ಪ್ರಾಣಕೊಟ್ಟು ರಾಕ್ಷಸಿಯೇ ನಿನ್ನನ್ನು ಮರೆಯಲಾಗುತ್ತಿಲ್ಲ
ನೋವನು ತಡೆಯಲಾಗುತ್ತಿಲ್ಲ ಮೌನ ಮುರಿಯುತ್ತಿಲ್ಲ ನೀನಿಲ್ಲದೆ ಬದುಕಲಾಗುತ್ತಿಲ್ಲ ದೇವರ ಬಳಿಯೂ ಹೋದೆ
ನಾನು ನಿನ್ನ ಮನದ ತುಂಬಾ ನೆನೆದು ಪ್ರೀತಿ ಬರಲು ಎಂದು ಇನ್ನೂ
ಬೇಡುತಿರುವೆ ನಾನು