Album: Ondonde
Singer: Rajesh, Raksha Arvindu
Music: Sadhu Kokila
Label: Ashwini Recording Company
Released: 2008-05-19
Duration: 04:33
Downloads: 2088997
ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದಾಗಿ ಕೂಡಿಟ್ಟ ಕವನ ನನ್ನಿಂದ ನಾ ದೂರ
ನಿಂತು ನಾ ಕಂಡೆ ಮಾತಾಡೋ ಮೌನ ಸೋಲುವುದು ಹೃದಯ ಹೀಗೇಕೆ ತಿಳಿತಿಳಿದು
ನಗುವೆ ನೀನೇಕೆ ಮಾತಾಡು ಓ ಮೌನ ಮಾತಾಡು ಒಂದೊಂದೇ ಬಚ್ಚಿಟ್ಟ
ಮಾತು ಒಂದೊಂದಾಗಿ ಕೂಡಿಟ್ಟ ಕವನ ಸುಳ್ಳು ಸುಳ್ಳೇ ಮುನಿಸು ಆ
ನೂರು ಕಳ್ಳ ಕನಸು ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟೋರ್ಯಾರು ಕೆನ್ನೆ ನಿಂದ,
ಮುತ್ತು ನಂದ ಬಗೆ ಹರಿಯದ ಒಗಟು ಇದು ಮೊದಲು ಅಪ್ಪಿಕೊಂಡ ಆ
ಮಧುರ ಮೌನದೊಳಗೆ ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು ಈ ವಿರಹದಲಿ
ಅಡಗಿದೆಯೋ ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ ಒಂದೊಂದೇ ಬಚ್ಚಿಟ್ಟ
ಮಾತು ಒಂದೊಂದಾಗಿ ಕೂಡಿಟ್ಟ ಕವನ ನನ್ನಿಂದ ನಾ ದೂರ ನಿಂತು ನಾ
ಕಂಡೆ ಮಾತಾಡೋ ಮೌನ ಓ, ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಆ ಮಂಕಾದ ರಾತ್ರೀಲಿ ಬಿಕ್ಕಳಿಸಿದ್ಯಾರು ತಪ್ಪು ನಿಂದ, ತಪ್ಪು ನಂದ ಕೊನೆಗಾಣದ
ಒಗಟು ಇದು ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸ ನೀ ಸಿಕ್ಕಾಗ
ಮಾತಾಡೋ ಮಾತೆಲ್ಲ ಬೇರೆ ಈ ಸುಳ್ಳನ್ನು ಕಲಿಸುವುದೇ ಕನಸು ಅದನ್ಯಾಕೆ ಬಯಸಿದೆ
ಮನಸು ಹೇಳುವೆಯಾ ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು ನಾ ಕಂಡೆ ಮಾತಾಡೋ ಮೌನ